ಮುಗಿಸಲ್ಪಟ್ಟ ಯೋಜನೆಗಳು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಹಂತ ೧

ನೋಡಲ್ ಏಜೆನ್ಸಿಯಾಗಿ ಕೆಎಸ್ಐಐಡಿಸಿಯ ಸತತ ಪರಿಶ್ರಮವು ಸಾರ್ವಜನಿಕ ಖಾಸಗೀ ಪಾಲುದಾರಿಕೆಯಲ್ಲಿ ದೇವನಹಳ್ಳಿಯಲ್ಲಿ ದೇಶದ ಮೊದಲ ಗ್ರೀನ್ ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕೆನ್ನುವ ಕನಸನ್ನು ನನಸಾಗಿಸಲು ನೆರವಾಗಿರುತ್ತದೆ. ಇದು ವಿಮಾನಯಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಾನಕವನ್ನು ತಂದಿರುತ್ತದೆ. ಅಂದಾಜು ರೂ.೨೦೦೦ ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಈ ವಿಮಾನ ನಿಲ್ದಾಣವು ಸದ್ಯಕ್ಕೆ ಬೆಂಗಳೂರಿನಲ್ಲಿ ಉಲ್ಬಣಿಸಿರುವ ವಾಯುಸಂಚಾರ ದಟ್ಟಣೆಯನ್ನು ಎದುರಿಸುತ್ತಿದೆ.

ಮತ್ತಷ್ಟು ಓದು

ಖನಿಜ ಭವನ

ಸಾಧ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನೂ ಉಯೋಗಿಸಿಕೊಂಡು ಕೆಎಸ್ಐಐಡಿಸಿಯು ಖನಿಜ ಭವನವನ್ನು ಅಭಿವೃದ್ದಿಪಡಿಸಿರುತ್ತದೆ. ಬೆಂಗಳೂರು ನಗರದ ಹೃದಯ ಭಾಗದಲ್ಲಿ, ಹಸಿರು ಪರಿಸರದ ನಡುವೆ, ಸಾಕಷ್ಟು ವಾಹನ ನಿಲುಗಡೆ ಸೌಲಭ್ಯ ಹೊಂದಿರುವ ಈ ಭವನವು ಬಹುರಾಷ್ಟ್ರೀಯ ಕಂಪನಿಗಳಿಗೆ, ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಇತರ ವ್ಯವಹಾರಿ ಸಂಸ್ಥೆಗಳಿಗೆ ಅತ್ಯುತ್ತಮವಾದ ಕಾರ್ಯಸ್ಥಳವನ್ನು ಒದಗಿಸಿರುತ್ತದೆ. ಕೆಎಸ್ಐಐಡಿಸಿಯ ಕಾರ್ಪೊರೇಟ್ ಮತ್ತು ಕೇಂದ್ರ ಕಚೇರಿಯು ಕೂಡಾ ಬೆಂಗಳೂರಿನಲ್ಲಿರುವ ಖನಿಜ ಭವನದಲ್ಲಿರುತ್ತದೆ.

ಐಟಿ ಪಾರ್ಕ್ – ರಾಜಾಜಿನಗರ

ಕೆಎಸ್ಐಐಡಿಸಿಯು ರೂ.೪೦ ಕೋಟಿಯ ವೆಚ್ಚದಲ್ಲಿ ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ವಸಾಹತುವಿನಲ್ಲಿ ಕೆಎಸ್ಐಐಡಿಸಿಯೊಂದಿಗೆ ಜಂಟೀ ಸಹಭಾಗಿತ್ವದಲ್ಲಿ ಐಟಿ ಪಾರ್ಕನ್ನು ಅಭಿವೃದ್ಧಿಪಡಿಸಿದೆ. ಈ ಪಾರ್ಕ್ ಅಂದಾಜು ೨೪,೦೦೦ ಚದರ ಮೀಟರ್ ಕಟ್ಟಡವನ್ನು ಹೊಂದಿದ್ದು, ಇದರಲ್ಲಿ ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ.

ಕೆಲಸದ ಸಮಯ

ಸಂಪರ್ಕಿಸಿ