ಅಂತರಾಷ್ಟ್ರೀಯ ಸಮಾವೇಶ ಕೇಂದ್ರ

ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕಿಗಾಗಿ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ) ಮೀಸಲಿಟ್ಟರುವ ಜಮೀನಿನಲ್ಲಿ ಸುಮಾರು ೩೫ ಎಕರೆ ನಿವೇಶನವನ್ನು ಅತ್ಯಾಧುನಿಕ ವಿನ್ಯಾಸದ ಅಂತರಾಷ್ಟ್ರೀಯ ಸಮಾವೇಶ ಕೇಂದ್ರ (ಐಸಿಸಿ) ಸ್ಘಾಪನೆಗೆ ಕರ್ನಾಟಕ ಸರ್ಕಾರವು (ಜಿಒಕೆ) ಒಪ್ಪಿಗೆ ನೀಡಿದ್ದು, ಈ ಕೇಂದ್ರವು ಸಮಾವೇಶ ಸಭಾಂಗಣ, ವಸ್ತು ಪ್ರದರ್ಶನ ಸಭಾಂಗಣ, ಫುಡ್ ಕೋರ್ಟ್ ಅಲ್ಲದೇ ಸ್ಟಾರ್ ಶ್ರೇಣಿಯ ಹೋಟೆಲುಗಳು / ಸೇವಾ ಅಪಾರ್ಟ್‌ಮೆಂಟ್ಸ್ ಗಳು ಮತ್ತಿತರ ಪೂರಕ ಸೌಲಭ್ಯಗಳನ್ನೂ ಹೊಂದಿದ್ದು, ಇದನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಆಯ್ಕೆ ಮಾಡಿಲಾಗುವ ಪಿಪಿಪಿ ಪಾಲುದಾರರು ಈ ಪೂರಕ ಸೌಲಭ್ಯಗಳನ್ನು ನಿರ್ಮಿಸುವುದಲ್ಲದೇ ಪೂರ್ವನಿರ್ಧಾರಿತ ಅವಧಿಗೆ ಐಸಿಸಿಯ ನಿರ್ವಹಣೆ ಮತ್ತು ಉಸ್ತುವಾರಿಯನ್ನೂ ಸಹ ನೋಡಿಕೊಳ್ಳುವರು. ಐಸಿಸಿ ಯೋಜನೆಯ ಅಭಿವೃದ್ಧಿಯಲ್ಲಿ ೬೦೦೦ ಆಸನ ಸಾಮರ್ಥ್ಯದ ಸಮ್ಮೇಳನಾ ಸಭಾಂಗಣ, ಮಸ್ತುಪ್ರದರ್ಶನ ಸಭಾಂಗಣ, ಫುಡ್ ಕೋರ್ಟ್ ಮತ್ತಿತರ ಸಂಬಂದಪಟ್ಟ ಸೌಲಭ್ಯಗಳೂ ಸೇರಿರುತ್ತವೆ.

ನಕ್ಷೆಯ ಪರಿಕಲ್ಪನೆ : ಗಾರ್ಡನ್ ಸಿಟಿ ಥೀಮ್ & ಗ್ರೀನ್ ಹೌಸ್ ಅಪ್ಶನ್ (ಐಸಿಸಿ & ಇಸಿಯ ಅಂದಾಜು ವೆಚ್ಚ ರೂ.೪೪೦ ಕೋಟಿಗಳು)


1. ಪಾಪ್ಯುಲಸ್ (ಆಸ್ಟ್ರೇಲಿಯ) ಪ್ರೈವೇಟ್ ಲಿಮಿಟೆಡ್ – ಅಂತರಾಷ್ಟ್ರೀಯ ಸಲಹೆಗಾರರು.

2. ಗ್ರೀನ್ ಸಿಟಿ ವಿಷಯದಲ್ಲಿ ಗ್ರೀನ್ ಹೌಸ್ ಪರಿಕಲ್ಪನೆಯನ್ನು ಆಯ್ಕೆಮಾಡಿಕೊಳ್ಳಲಾಗಿದೆ.

3. ಮೊದಲ ಸುತ್ತಿನ ಬಿಡ್ ಪ್ರಕ್ರಿಯೆ:

  • ಅರ್ಹತೆಗೆ ಬೇಡಿಕೆಯನ್ನು [ರೆಕ್ವೆಸ್ಟ್ ಫಾರ್ ಕ್ವಾಲಿಫಿಕೇಶನ್ (ಆರ್ ಎಫ್ ಕ್ಯೂ)] ದಿನಾಂಕ: ೦೧.೦೯.೨೦೧೫ರಲ್ಲಿ ಬಿಡುಗಡೆಗೊಳಿಸಲಾಗಿದೆ.
  • ಅರ್ಜಿಗೆ ಮುಂಚಿನ ಸಮಾಲೋಚನೆಯು ೨೨.೦೯.೨೦೧೫ ರಲ್ಲಿ ನಡೆಯಿತು
  • ಸಂಭ್ಯಾವ್ಯ ಡೆವಲಪರುಗಳೊಂದಿಗೆ ದುಂಡು ಮೇಜಿನ ಸಭೆಯು ೨೨.೧೦.೨೦೧೫ರಂದು ನಡೆಯಿತು.
  • ೧೫. ೦೩.೨೦೧೬ರಂದು ಎರಡು ಆರ್ ಎಫ್ ಕ್ಯೂ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಎರಡೂ ಅರ್ಜಿಗಳೂ ಸ್ವೀಕಾರಾರ್ಹವಾಗಿರುತ್ತವೆ.
    • ಟಾಟಾ ರಿಯಲ್ಟಿ & ಇನ್ ಫ್ರಾಸ್ಟ್ರ ಕ್ಚರ್ ಲಿಮಿಟೆಡ್
    • ಎಸ್ ಎಫ್ ಟ್ರಾನ್ಸ್ ಟಾಡಿಯಾ ಪ್ರೈ ಲಿಮಿಟೆಡ್, ಮೆ. ಗ್ಯಾನನ್ ಡಂಕರ್ ಲೇ & ಕೋ ಲಿಮಿಟೆಡ್ ಇವರು ಸಹಯೋಗದಲ್ಲಿ.
  • ಆರ್ ಎಫ್ ಕ್ಯೂ, ಸಿಎ & ಪಿಐಎಂನ್ನು ೧೯. ೦೯. ೨೦೧೬ರಂದು ಹೊರಡಿಸಲಾಗಿದ್ದು, ಬಿಡ್ ಗೆ ಮುಂಚಿನ ಸಭೆಯು ೧೪ನೇ ಅಕ್ಟೋಬರ್ ಮತ್ತು ೦೪ನೇ ನವೆಂಬರ್ ೨೦೧೬ ರಂದು ನಡೆದಿರುತ್ತದೆ.
  • ಮನವಿಗಳ ಆಧಾರದ ಮೇಲೆ ಕೊನೆಯ ದಿನಾಂಕವನ್ನು ೨೬.೧೨.೨೦೧೬ ರ ವರೆಗೆ ವಿಸ್ತರಿಸಲಾಗಿರುತ್ತದೆ; ಯಾವುದೇ ಬಿಡ್ ನ್ನು ಸ್ವೀಕರಿಸಿರುವುದಿಲ್ಲ.

4. ಸಂಭ್ಯಾವ್ಯ ಬಿಡ್ ದಾರರು/ ಸ್ವೇಕ್ ಹೋಲ್ಡರುಗಳೊಂದಿಗೆ ೨೦.೦೨.೨೦೧೭, ೪ನೇ ಆಗಸ್ಟ್ ೨೦೧೭ ಮತ್ತು ೧೧ನೇ ಆಗಸ್ಟ್ ೨೦೧೭ ರಂದು ದುಂಡು ಮೇಜಿನ ಸಭೆ ನಡೆದಿರುತ್ತದೆ.

5. ಆಯ್ಕೆಯಾದ ಮಾದರಿಗೆ ಬಿಡ್ ಕಾಗದಪತ್ರಗಳನ್ನು ಪಡೆಯಲಾಗುವುದು ಮತ್ತು ಬಿಡ್ ಪ್ರಕ್ರಿಯೆ ಆರಂಭವಾಗಿರುತ್ತದೆ.

ಕೆಲಸದ ಸಮಯ

ಸಂಪರ್ಕಿಸಿ