ಟ್ರಂಕ್ ಕೊಳವೆ ಮಾರ್ಗ
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ದಾಭೋಲ್ ನಿಂದ ಬೆಂಗಳೂರುವರೆಗೆ ಅನಿಲ ಸರಬರಾಜು ಮಾಡಲು ೭೪೬ ಕಿ.ಮೀ ಉದ್ದದ ೧೬ ಎಂಎಂಎಸ್ ಸಿ.ಎಮ್.ಡಿ ವಿನ್ಯಾಸ ಸಾಮರ್ಥ್ಯದ ಟ್ರಂಕ್ ಕೊಳವೆ ಮಾರ್ಗ ಅಳವಡಿಸುವಿಕೆ ಕೈಗೆತ್ತಿಕೊಂಡು ಮುಗಿಸಿರುತ್ತದೆ. ಕೊಳವೆ ಮಾರ್ಗವು ಕರ್ನಾಟಕದ ಒಂಭತ್ತು ಜಿಲ್ಲೆಗಳಾದ ಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಮತ್ತು ರಾಮನಗರ ಮೂಲಕ ಹಾದು ಹೋಗುತ್ತದೆ. ರಾಜ್ಯದಲ್ಲಿ ಗೇಲ್ ರವರ ಅನಿಲ ಕೊಳವೆ ಮಾರ್ಗದ ಅಳವಡಿಕೆಯಲ್ಲಿ ಕೆಎಸ್ಐಐಡಿಸಿಯು ತನ್ನ ನೋಡಲ್ ಏಜೆಂಟ್ ಪಾತ್ರವನ್ನು ಮುಂದುವರೆಸಿರುತ್ತದೆ. ಕೊಳವೆ ಮಾರ್ಗವು ಈ ಕೆಳಗೆ ತೋರಿಸಿರುವಂತೆ ೧೮.೦೨.೨೦೧೩ ರಂದು ಕಾರ್ಯಾರಂಭ ಮಾಡಿರುತ್ತದೆ.
ನಗರ ಅನಿಲ ಹಂಚಿಕೆ(ಸಿಜಿಡಿ)
ಪೆಟ್ರೋಲಿಯಂ & ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪಿ.ಎನ್.ಜಿ.ಆರ್.ಬಿ.) ಅವರು ಬೆಂಗಳೂರು ವಲಯದಲ್ಲಿ ಸಿಜಿಡಿ ಒದಗಿಸುವ ಸಲುವಾಗಿ ಕರೆದಿರುವ ಟೆಂಡರಿನಲ್ಲಿ ಮೆ. ಗೇಲ್ ಗ್ಯಾಸ್ ಲಿಮಿಟೆಡ್ ಇವರು ಯಶಸ್ವಿ ಬಿಡ್ಡರ್ ಆಗಿರುತ್ತಾರೆ. ವಿವರಗಳನ್ನು ಕೆಳಗೆ ನೀಡಲಾಗಿದೆ.
ಸಿಜಿಡಿ ಜಾಲವು ನಗರಗಳಲ್ಲಿರುವ ಮನೆಗಳು, ವಾಹನಗಳ ಸಿ ಎನ್ ಜಿ ಮತ್ತು ವಾಣಿಜ್ಯ / ಕೈಗಾರಿಕಾ ಇಂಧನದ ಬೇಡಿಕೆಯನ್ನು ಪೂರೈಸಲಿದೆ.
ಮೆ. ಗೇಲ್ (Gail) / ಗೇಲ್ ಗ್ಯಾಸ್ ಲಿಮಿಟೆಡ್ ಇವರೊಂದಿಗೆ ರೂ.೨೦೦ ಕೋಟಿಯ ಅಧಿಕೃತ ಬಂಡವಾಳದ ಜಂಟೀ ಉದ್ಯಮ ಕಂಪನಿಯನ್ನು ಸ್ಥಾಪಿಸಲು (ಜೆವಿಸಿ) ರಾಜ್ಯ ಸರ್ಕಾರದ ಏಜೆನ್ಸಿಯಾಗಿ ಕೆಎಸ್ಐಐಡಿಸಿಯನ್ನು ಗೊತ್ತುಪಡಿಸಲಾಗಿರುತ್ತದೆ. ಜಿಎಐಎಲ್ / ಗೇಲ್ ಗ್ಯಾಸ್ ಲಿಮಿಟೆಡ್ ಇವರು ಕಂಪನಿಯ 26% ಶೇರುಗಳನ್ನು ಹೊಂದಿದ್ದರೆ, ಕೆಎಸ್ಐಐಡಿಸಿಯು ೨೪% ಶೇರುಗಳನ್ನು ಹೊಂದಿ, ಉಳಿದ ೫೦% ಶೇರುಗಳನ್ನು ಹಣಕಾಸು ಸಂಸ್ಥೆಗಳು, ಹೂಡಿಕೆದಾರರು ಮತ್ತು ಸ್ರಾಟೆಜಿಕ್ ಪಾಲುದಾರರಿಗೆ (ಹಣಕಾಸು ಸಂಸ್ಥೆಗಳ ಸ್ರಾಟೆಜಿಕ್ ಪಾಲುದಾರರು ಮತ್ತು ಅವರ ಅಂಗ ಸಂಸ್ಥೆಗಳಲ್ಲಿ ಯಾವುದೇ ಒಬ್ಬ ಹೂಡಿಕೆದಾರರಿಗೆ ೨೦%ಗಿಂತ ಹೆಚ್ಚು ಶೇರು ಪಡೆಯಲು ಅವಕಾಶ ನೀಡಲಾಗುವುದಿಲ್ಲ) ನೀಡಲಾಗುವುದು.
ಸೋಮವಾರ – ಶನಿವಾರ
ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ೧:೩೦
ಮಧ್ಯಾಹ್ನ ೨:೧೫ ರಿಂದ ಸಂಜೆ ೫:೩೦
೨ನೇ & ೪ನೇ ಶನಿವಾರ ಹಾಗು ಪ್ರತಿ ಭಾನುವಾರ – ರಜೆ
ಫ್ಯಾಕ್ಸ್ : 080 2225 5740
ಕರ್ನಾಟಕ ರಾಜ್ಯ
ಕೈಗಾರಿಕಾ ಮತ್ತು ಮೂಲಸೌಲಭ್ಯ
ಅಭಿವೃದ್ಧಿ ನಿಗಮ ನಿಯಮಿತ
ಖನಿಜ ಭವನ, ೪ನೇ ಮಹಡಿ,
ಈಸ್ಟ್ ವಿಂಗ್, ಸಂಖ್ಯೆ ೪೯, ರೇಸ್ ಕೋರ್ಸ್
ರಸ್ತೆ, ಬೆಂಗಳೂರು – 560 001
ದೂರವಾಣಿ : 080 2225 8133