ತದಡಿ ಬಂದರು

ಪಿಪಿಪಿ ಆಧಾರದ ಮೇಲೆ ತದಡಿಯಲ್ಲಿನ ಸಮುದ್ರ ಬಂದರನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೆಎಸ್ಐಐಡಿಸಿಯನ್ನು ನೋಡಲ್ ಏಜೆನ್ಸಿಯೆಂದು ಗೊತ್ತುಪಡಿಸಲಾಗಿರುತ್ತದೆ. ಯೋಜನೆಯ ಯಥಾಸ್ಥಿತಿ ವರದಿ ಈ ಕೆಳಕಂಡಂತಿದೆ:

  • ಕೆಎಸ್ಐಐಡಿಸಿಯು ರೂ.೫.೦೦ಲಕ್ಷ ಶೇರು ಬಂಡವಾಳದೊಂದಿಗೆ “ತದಡಿ ಬಂದರು ಲಿಮಿಟೆಡ್” ಎಂಬ ವಿಶೇಷ ಉದ್ದೇಶದ ಕಂಪನಿಯನ್ನು ಸಂಘಟಿಸಿದೆ.

ಯೋಜನೆಯ ಯಥಾಸ್ಥಿತಿ:

  • 1. ಬಂದರಿಗಾಗಿ ಸುಮಾರು ೧೪೨೦ ಎಕರೆ ಜಮೀನು ಲಭ್ಯವಿರುತ್ತದೆ.
  • 2. ವಿವರವಾದ ಸಂಭಾವ್ಯತಾ ವರದಿ (ಡಿ ಎಫ್ ಆರ್)ಯನ್ನು ಮೆ. ಪ್ರೋಯಿನ್ ಟೆಕ್ (ಸ್ವೈನ್) ಮತ್ತು ಮೆ. ಮಿರ್ ಪ್ರಾಜೆಕ್ಟ್ಸ್ & ಕನ್ಸಲ್ಟೆಂಟ್ಸ್ ಇವರ ಒಕ್ಕೊಟವು ಸಿದ್ದಪಡಿಸಿರುತ್ತದೆ.

ಗರಿಷ್ಟ ಸಾಮರ್ಥ್ಯ ೩೪.೨೫ ಎಂಟಿಪಿಎ (೭ ಬರ್ತ್ ಗಳು); ಅಂದಾಜು ಯೋಜನಾ ವೆಚ್ಚ ರೂ.೩೦೦೦ ಕೋಟಿಗಳು (೨೦೧೭ರ ದರ).

3. ಇಐಎ ಮತ್ತು ಸಿಆರ್ ಝಡ್ ಅಧ್ಯಯನಗಳು – ನ್ಯಾಷನಲ್ ಎನ್ವಿರಾನ್ಮೆಂಟ್ & ರಿಸರ್ಚ್ ಇನ್ಸ್ಟಿಟ್ಯೂಟ್ ನಿಂದ

  • ಸಿಆರ್ ಝಡ್ ಕ್ಲಿಯರೆನ್ಸ್ – ಪಡೆಯಲಾಗಿದೆ
  • ಇಐಎ ವರದಿ ಮತ್ತು ಹೆಚ್ಚುವರಿ ಅಧ್ಯಯನ ವರದಿಯನ್ನು ಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ.
  • ಪರಿಸರ ಮತ್ತು ಅರಣ್ಯ ಮಂತ್ರಾಲಯ –ಪರಿಸರ ಕ್ಲಿಯರೆನ್ಸ್ ನೀಡಿದೆ.
    • ಎಕ್ಸ್ ಪರ್ಟ್ ಅಪ್ರೈಸಲ್ ಕಮಿಟಿಯು (ಇಎಸಿ) ಕಾಡಿನ ಕ್ಲಿಯರೆನ್ಸ್ ಮತ್ತು ನದೀಮುಖದಲ್ಲಿ ಬೈವಾಲ್ವ್ ಗಳ ಮೌಲ್ಯೀಕರಣವೂ ಸೇರಿದಂತೆ ಕೆಲವೊಂದು (೨೭ ಸಂಖ್ಯೆ) ನಿಬಂಧನೆಗಳೊಂದಿಗೆ ಪರಿಸರದ ಬಗ್ಗೆ ಕ್ಲಿಯರೆನ್ಸ್ ನೀಡಲು ಶಿಫಾರಸ್ಸು ಮಾಡಿರುತ್ತದೆ.
    • ಬೈವಾಲ್ವ್ ಗಳ ಮೌಲ್ಯೀಕರಣದ ಮೇಲೆ ಅಧ್ಯಯನ – ಡಿಪಾರ್ಟ್ ಮೆಂಟ್ ಆಫ್ ಸ್ವಡೀಸ್ ಇನ್ ಮೆರೈನ್ ಬಯಾಲಜಿ, ಕಾರವಾರ ಇವರಿಂದ ವರದಿ ಸಿದ್ದವಾಗಿರುತ್ತದೆ.
    • ಹಂತ-೧. ಸುಮಾರು ೨೦೦ ಎಕರೆ ಮ್ಯಾನ್ ಗ್ರೂವ್ಸ್ ಕಾಡನ್ನು ತೆರವುಗೊಳಿಸುವುದು ನಿರೀಕ್ಷಣೆಯಲ್ಲಿರುತ್ತದೆ.

4. ಬಿಡ್ ಕಾಗದಪತ್ರಗಳು ಐಡೆಕ್(ಟಿಎ)ರವರಿಂದ ಅಖೈರುಗೊಳಿಸುವಿಕೆಯ ಹಂತದಲ್ಲಿರುತ್ತದೆ

ಕಾಡು ಮತ್ತು ಪರಿಸರದ ಬಗ್ಗೆ ಕ್ಲಿಯರೆನ್ಸ್ ವರದಿ ಬಂದ ನಂತರ ಟೆಂಡರ್ ಪ್ರಕ್ರಿಯೆಯನ್ನು (ಆರ್.ಎಫ್.ಕ್ಯೂ) ಪ್ರಾರಂಭಿಸಲಾಗುವುದು.

ಕೆಲಸದ ಸಮಯ

ಸಂಪರ್ಕಿಸಿ